ಪರೋಕ್ಷವಾಗಿ ಕಾಂಗ್ರೆಸ್ ಕಡೆ ಮುಖ ಮಾಡಿದ್ರಾ ಶೆಟ್ಟರ್ ? ರಾಜಿನಾಮೆ ಗೆ ರೆಡಿ ಆಗಿದ್ದೆ ಅನ್ನೋದನ್ನ ಒಪ್ಪಿಕೊಂಡ ಶೆಟ್ಟರ್

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ
ಬೆಳಿಗ್ಗೆ ಎಲ್ಲ ಕಾರ್ಯಕರ್ತರ ಸಭೆ ಕರೆದಿದ್ದೆ
ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ
ಧರ್ಮೇಂದ್ರ ಪ್ರಧಾನ್ ಅವರು ಬರಲಿದ್ದಾರೆ ಎಂದು ಹೇಳಿದ್ದಾರೆ
ನಮ್ಮ ಜೊತೆ ಸಮಾಲೋಚನೆ ಮಾಡಲು ಬರುತ್ತಿದ್ದಾರೆ ಎಂದು ಹೇಳಿದ್ದಾರೆ
ಸಿಎಂ , ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಹ್ಲಾದ್ ಜೋಶಿ ನಮ್ಮ ಮನೆಗೆ ಬರಲಿದ್ದಾರೆ
ಮೂವರೂ ಸೇರಿ ನಮ್ಮ ಜೊತೆ ಸಮಾಲೋಚನೆ ಮಾಡಲಿದ್ದಾರೆ
ಸಮಾಲೋಚನೆ ನಂತರ ನಿರ್ಧಾರ ಪ್ರಕಟ ಮಾಡಲಿದ್ದೇವೆ
ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಚರ್ಚೆ ನಡೆದಿದೆ ಅನ್ನೋ ಮಾಹಿತಿ ಇದೆ
ಕುಟುಂಬದಲ್ಲಿ ಯಾರಿಗೂ ಟಿಕೆಟ್ ನೀಡುವ ಪ್ರಮೇಯ ಇಲ್ಲ
ಸ್ಪರ್ಧೆ ಮಾಡುವುದಿದ್ದರೆ ನಾನೇ ಮಾಡುತ್ತೇನೆ ಎಂದು ಹೇಳಿದ್ದೇನೆ
ಮುಂದಿನ ನಿರ್ಧಾರದ ತಯಾರಿ ಮಾಡಿಕೊಂಡಿದ್ದೇನೆ
ಮೂವರೂ ನಾಯಕರು ಮನೆಗೆ ಬಂದು ಏನು ಮಾತನಾಡುತ್ತಾರೆ ಕಾಯ್ದು ನೋಡುತ್ತೇನೆ
ಅವರು ಬಂದು ಸಮಾಲೋಚನೆ ನಡೆಸಿದ ನಂತರ ನಿರ್ಧಾರ ಬಗ್ಗೆ ತಿಳಿಸುತ್ತೇನೆ
ಒಬ್ಬ ಶಾಸಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ
ಸ್ಪೀಕರ್ ಕಾಗೇರಿ ಅವರ ಬಳಿ ಭೇಟಿಯಾಗಲು ಸಮಯ ಕೇಳಿದ್ದೆ
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಹೋಗಲು ಆಗಿಲ್ಲ
ಇವತ್ತಿನ ಚರ್ಚೆಯಿಂದ ಇದು ಅಂತಿಮವಾಗುತ್ತೆ
ನಾಮಪತ್ರ ಸಲ್ಲಿಸಲು ಇನ್ನೂ 20 ರವರೆಗೂ ಟೈಂ ಇದೆ
ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂಬ ಸಂದೇಶ ನೀಡಿದ ಶೆಟ್ಟರ್
ರಾಜಿನಾಮೆ ಗೆ ರೆಡಿ ಆಗಿದ್ದೆ ಅನ್ನೋದನ್ನ ಒಪ್ಪಿಕೊಂಡ ಶೆಟ್ಟರ್
ಧರ್ಮೇಂದ್ರ ಪ್ರಧಾನ್ ಬರದೇ ಹೋದರೆ ರಾಜೀನಾಮೆಗೆ ರೆಡಿ ಎಂದ ಶೆಟ್ಟರ್
ಪಾಲಿಕೆ ಕಾರ್ಯಕರ್ತರ ಧಮ್ಕಿ ಹಾಕಿರೋ ಆರೋಪ
ಎಲ್ಲಿವರೆಗೆ ನಡೆಯತ್ತೆ ಇದು ಎಂದ ಶೆಟ್ಟರ್
ಇದು ಕೊನೆಯ ಅವಕಾಶ ಇದು ಲಾಸ್ಟ್ ಗಡುವು ಎಂದ ಶೆಟ್ಟರ್
ಇವತ್ತು ನಿರ್ದಾರ ಮಾಡ್ತೀನಿ
ನಾನು ಇದುವರೆಗೆ ಯಾವುದೇ ರಾಜಕೀಯ ಪಕ್ಷದ ನಾಯಕರ ಜೊತೆ ಸಂಪರ್ಕ ಮಾಡಿಲ್ಲ
ನಾನು ಹೇಗೆ ಸ್ಪರ್ಧೆ ಮಾಡಿದ್ರು ಗೆಲ್ತೀನಿ
ಮುಖ್ಯಮಂತ್ರಿಗಳು,ಕೇಂದ್ರಮಂತ್ರಿಗಳು ಬರ್ತಿದಾರೆ
ಎಲ್ಲದಕ್ಕೂ ಇಂದು ಅಂತ್ಯ ಆಗತ್ತೆ
ಕಾಂಗ್ರೆಸ್ ಬಗ್ಗೆ ಚರ್ಚೆ ಇದೀಗ ಅಪ್ರಸ್ತುತ ಇವತ್ತಿನ ಪ್ರಶ್ನೆ ಬೇಡ
ಕಾಂಗ್ರೆಸ್ ಬಗ್ಗೆ ಕಮೆಂಟ್ ಮಾಡಲ್ಲ
ಪರೋಕ್ಷವಾಗಿ ಕಾಂಗ್ರೆಸ್ ಕಡೆ ಮುಖ ಮಾಡಿದ್ರಾ ಶೆಟ್ಟರ್ ?
ಇದು ಕೊನೆಯ ಮಾತುಕತೆ ಎಂದು ಸ್ಪಷ್ಟಪಡಿಸಿದ ಶೆಟ್ಟರ್