Uncategorized

ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರನ್ನು ಇಟ್ಟಂಗಿಯಿಂದ ಹೊಡೆದು ಕೊಲೆಗೈದ ಘಟನೆ ನಡೆದಿದೆ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್ ವೊಬ್ಬರನ್ನು ಕುಡಿತ ಮತಿನಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈದ ಘಟನೆ ರವಿವಾರ ರಾತ್ರಿ ನಗರದಲ್ಲಿ ನಡೆದಿದೆ.

ಗಂಗಾಧರ ನಗರದ (ಸೆಟ್ಲಮೆಂಟ್) ನಿವಾಸಿಯಾದ ಸುಶಾಂತ ದಾಂಡೇಲಿ (33) ಎಂಬಾತನೇ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ರಾಹುಲ್ ಗೋಕಾಕ್, ಸಂದೀಪ್ ಲೋಕಾಪುರ, ಗಬ್ಯಾ, ಮಹೇಶ ಎಂಬಾತನೇ ಕೊಲೆ ಗೈದ್ ಆರೋಪಿಗಳಾಗಿದ್ದಾರೆಂದು ತಿಳಿದುಬಂದಿದೆ.

ಇವರು ರವಿವಾರ ರಾತ್ರಿ ಕುಡಿತ ಮತ್ತಿನಲ್ಲಿ ಡೆನಿಸನ್ಸ್ ಹೊಟೇಲ್ ಪಕ್ಕದ ಮೈದಾನದಲ್ಲಿ ಸುಶಾಂತ ದಾಂಡೇಲಿಯನ್ನು ಕರೆಸಿದ್ದು, ಈ ವೇಳೆ ರಾಹುಲ್ ದಾಂಡೇಲಿ ತನ್ನ ವೈಯಕ್ತಿಕ ದ್ವೇಷದಿಂದ ಇತರ ಸಹಚರರ ಸಹಾಯ ಪಡೆದು ಮಾರಕಾಸ್ತ್ರಗಳಿಂದ ಮನಬಂದಂತೆ ಹೊಡೆದಿದ್ದಾರೆ. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗೋಕುಲರಸ್ತೆಯ ಪೋಲಿಸರು ಗಂಭೀರವಾಗಿ ಗಾಯಗೊಂಡ ಸುಶಾಂತ ದಾಂಡೇಲಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು ಕೂಡಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸದ್ಯ ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

ಈ ಬೆನ್ನಲ್ಲೇ ಗೋಕುಲರಸ್ತೆಯ ಪೋಲಿಸರು ಅಲರ್ಟ್ ಆಗಿದ್ದು, ಕೊಲೆ ಗೈದ್ ಆರೋಪಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಗೋಕುಲರಸ್ತೆಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!