ಹುಬ್ಬಳ್ಳಿಯಲ್ಲಿ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ.ರೀಲ್ಸ್ ವಿಷಯಕ್ಕೆ ನಡೆಯಿತು ಅಮಾನವೀಯ ಕೃತ್ಯ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ನಿತ್ಯ ಕೊಲೆ, ಹಲ್ಲೆ, ಕಳ್ಳತನ ಪ್ರಕರಣಗಳು ಸಾಮಾನ್ಯವಾಗಿವೆ. ಇಂತಹ ಹೊತ್ತಿನಲ್ಲೆ ಈಗ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ.
ಕ್ಷುಲ್ಲಕ ಕಾರಣಕ್ಕೆ ಯುವಕನ್ನು ಬೆತ್ತಲೆಗೊಳಿಸಿ, ಹಲ್ಲೆ ಬಳಿಕ, ಅತ್ಯಾಚಾರ ಎಸಗಿದ ಕೃತ್ಯ ಹುಬ್ಬಳ್ಳಿ ಧಾರವಾಡ ಮಂದಿಯನ್ನು ಬೆಚ್ಚಿಬಿಳಿಸಿದೆ.
ದಿನೆ ದಿನೇ ಛೋಟಾ ಮುಂಬೈ ಹುಬ್ಬಳ್ಳಿ ನಗರದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಇಷ್ಟು ದಿನ ಕೊಲೆ, ಹತ್ಯೆ, ದರೋಡೆ ಪ್ರಕರಣಗಳು ನಡೆಯುತ್ತಿದ್ದವು, ಆದರೆ ಇಂದು ತಡವಾಗಿ ಬೆಳಕಿಗೆ ಬಂದ ಘಟನೆಯೊಂದು ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದೆ..
ಇದು ಪುಣ್ಯ ಭೂಮಿ ಕರ್ನಾಟಕನಾ..? ಅಥವಾ ಬಿಹಾರ..? ಎನ್ನುವ ಅನುಮಾನ ಮೂಡಿದೆ. ಕುಡಿದ ಮತ್ತಿನಲ್ಲಿ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಯುವಕನನ್ನು ಅತ್ಯಾಚಾರ ಮಾಡಿ ಅದನ್ನು ಮೊಬೈಲ್ ಚಿತ್ರೀಕರಣ ಮಾಡಿ, ಚಿತ್ರಹಿಂಸೆ ಕೊಟ್ಟ ಘಟನೆ ಮೂರು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಇನ್ನೂ ರೀಲ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಆರಂಭವಾದ ವೈಷಮ್ಯ ಅಮಾನವೀಯ ಕೃತ್ಯಕ್ಕೆ ಕಾರಣವಾಗಿದೆ. ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್ ,ಮಂಜು ಎಂಬುವರು ಈ ಅಮಾನವೀಯ ಕೃತ್ಯ ನಡೆಸಿದ್ದಾರೆ.
ಸಂತ್ರಸ್ತ ಸಂದೀಪ್ ಮತ್ತು ಆರೋಪಿಗಳು ಈ ಹಿಂದೆ ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರು, ಹೀಗಾಗಿ ಪರಸ್ಪರ ಸ್ನೇಹಿತರಾಗಿದ್ದರು. ಆದರೆ ಕೆಲವು ತಿಂಗಳಿಂದ ಆರೋಪಿಗಳ ಸಹವಾಸ ಬಿಟ್ಟ ಸಂದೀಪ್ ಹುಬ್ಬಳ್ಳಿ ಹೊಸೂರಿಗೆ ಶಿಫ್ಟ್ ಆಗಿದ್ದ, ಇದಾದ ಕೆಲವು ದಿನಗಳ ಬಳಿಕ ಧಾರವಾಡಗೆ ಹೋಗಿ ನೆಲೆಸಿದ್ದ. ಸಮಯದಲ್ಲಿ ಘಟನೆ ಪ್ರಮುಖ ಆರೋಪಿ ಪ್ರಜ್ವಲ್ ಜೊತೆಗೆ ಇನ್ಸ್ಟಾಗ್ರಾಂನಲ್ಲಿ ಚಾಟ್ ಮಾಡಿದ್ದ ಸಂದೀಪ್ ವಿನಾಕಾರಣ, ಪ್ರಜ್ವಲ್ ತಾಯಿಯನ್ನು ನಿಂದಿಸಿದ್ದ ಎನ್ನಲಾಗಿದೆ.
ಇದರಿಂದ ಕೋಪಗೊಂಡ ಪ್ರಜ್ವಲ್ ತನ್ನ ಸ್ನೇಹಿತರ ಜೊತೆಗೆ ಸಂದೀಪ್ ನನ್ನು ಸೆಟ್ಲಮೆಂಟ್ ಏರಿಯಾಗೆ ಕರೆಸಿಕೊಂಡಿದ್ದ. ಈ ವೇಳೆ ಅಜ್ಞಾತ ಸ್ಥಳಕ್ಕೆ ಸಂದೀಪ್ ನನ್ನು ಕರೆದುಕೊಂಡು ಹೋದ ಆರೋಪಿಗಳು ಕಂಠಪೂರ್ತಿ ಕುಡಿದು ಮೊದಲಿಗೆ ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ಸಂದೀಪ್ ನನ್ನು ಸಂಪೂರ್ಣ ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿದ್ದಾರೆ. ಇದಲ್ಲದೆ ಸಂದೀಪ್ ಮೇಲೆ ಅತ್ಯಾಚಾರ ಎಸಗಿ ಮೃಗೀಯ ವರ್ತನೆ ತೋರಿದ್ದಾರೆ.