Uncategorized

ಮೂರು ಜನ ದರೋಡೆಕೋರರನ್ನು ಹೆಡೆಮುರಿ ಕಟ್ಟಿದ ಇನ್ಸೆಪೆಕ್ಟ‌ರ್ ಚನ್ನಣ್ಣನವರ & ಟೀಮ್

ಹುಬ್ಬಳ್ಳಿ

ವರದಿಗಾರರು. ಪವನ ಹಿರೇಮಠ

ಕುಸುಗಲ್ ಹತ್ತಿರದ ರಿಂಗ್ ರಸ್ತೆಯಲ್ಲಿ ವೈಕ್ತಿಯನ್ನು ಥಳಿಸಿ ಹಣ ಹಾಗೂ ಮೊಬೈಲ್ ದರೋಡೆ ಮಾಡಿದ್ದ ಮೂವರನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಾದ ವಿನಯ ಕಟ್ಟಿಮನಿ, ಜಗದೀಶ ಬಂಡಿವಾಡ ಹಾಗೂ ಗಣೇಶ ಹೊಂಬರಡಿ ಎಂದು ಗುರುತಿಸಲಾಗಿದ್ದು ಆರೋಪಿತರಿಂದ ಬೈಕ್ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಇನ್ನು 3 ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗೋಪಾಲ ಬ್ಯಾಕೋಡ ಪೊಲೀಸ್ ಅಧೀಕ್ಷಕರು . ನಾರಾಯಣ ಬರಮನಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಎಸ್‌.ಎಮ್.ನಾಗರಾಜ ಡಿ.ಎಸ್.ಪಿ ಗ್ರಾಮೀಣ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸಪೆಕ್ಟ‌ರ್ ಮುರಗೇಶ ಚೆನ್ನಣ್ಣನವರ ನೇತೃತ್ವದಲ್ಲಿ ಪಿಎಸ್‌ಐ ಸಚಿನ ಅಲಮೇಲಕರ, ಸಿಬ್ಬಂದಿಗಳಾದ ಎಸ್.ಐ.ಹಿರೇಹೊಳಿ, ಎನ್.ಎಂ.ಹೊನ್ನಪ್ಪನವರ, ಎ.ಎ.ಕಾಕರ, ಚೆನ್ನಪ್ಪ ಬಳ್ಳೋಳ್ಳಿ, ಮಹಾಂತೇಶ ಮದ್ದಿನ, ಗಿರೀಶ್ ತಿಪ್ಪಣ್ಣನವರ, ಸಿ.ಬಿ.ಜನಗಣ್ಣನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

ಇನ್ನು ಆರೋಪಿಗಳನ್ನು ಬಂಧಿಸಿದ ಸಿಬ್ಬಂದಿಗಳ ಕಾರ್ಯವೈಖರಿಗೆ ಎಸ್.ಪಿ ಗೋಪಾಲ ಬ್ಯಾಕೋಡ ರವರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!