ಗೋಕುಲ ರೋಡ್ ಪೋಲೀಸರ ಭರ್ಜರಿ ಬೇಟೆ. ಚಾಲಾಕಿ ಇಬ್ಬರು ಬೈಕ ಕಳ್ಳರಿಂದ 11 ಬೈಕ ವಶ.

ಹುಬ್ಬಳಿಯ ಗೋಕುಲ ರೋಡ ಡಾಲರ್ ಕಾಲನಿ ಬಸವೇಶ್ವರ ಖಾನಾವಳಿ ಎದುರಿಗೆ ಇಟ್ಟ 40, ಸಾವಿರ ರೂಪಾಯಿಯ ಸಿಬಿ ಶೈನ್ ಮೋಟಾರ ಸೈಕಲ್ ನಂ ಕೆಎ-25-ಎಚ್.ಎ-9038 ನ ವಾಹನವನ್ನ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇನ್ನು ಬೈಕ ಮಾಲಕರಾದ
ನಾಗರಾಜ ಪದಮಪ್ಪ ಕಲಗುದರಿ ಅವರು ಗೋಕುಲ ರೋಡ್ ಪೊಲೀಸ ಠಾಣೆಯಲ್ಲಿ ದೂರ ನೀಡಿದರು.
ಇನ್ನು ಇನ್ಸಪೆಕ್ಟರ ಪ್ರವೀಣ ನೀಲಮ್ಮನವರ ಕಳ್ಳರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.

ಇನ್ನು ಕಾರ್ಯಾಚರಣೆಗೆ ಇಳಿದ ಪೊಲೀಸರು ಇಬ್ಬರು ಚಾಲಾಕಿ ಬೈಕ ಕಳ್ಳರಾದ ಪ್ರಕಾಶ ಬಾಬು ಕಾಂಬಳೆ ವಯಾ 37 ವರ್ಷ ಹಾಗು ವಿಷ್ಣು @ ವಿಜ್ಞಾ ಶಿವಣ್ಣ ನಂದ್ಯಾಳ ವಯಾ 40 ವರ್ಷ ಈ ಇಬ್ಬರು ಬೈಕ ಕಳ್ಳರನ್ನು ಪತ್ತೆ ಮಾಡಿ ಬಂಧಿಸಿ ಅವರಿಂದ ಸುಮಾರು ೧೧ ಮೋಟಾರ ಸೈಕಲ್‌ನ್ನ ವಶಪಡಿಸಿಕೊಂಡಿದ್ದು ಅಲ್ಲದೇ ಇಬ್ಬರು ಕಳ್ಳರು ಹುಬ್ಬಳ್ಳಿ ಗೋಕುಲ ರೋಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 4 ಮೋಟಾರ ಸೈಕಲ್, ಹಳೇಹುಬ್ಬಳ್ಳಿ ಠಾಣೆಯ ವ್ಯಾಪ್ತಿಯಲ್ಲಿ 3 ಮೋಟಾರ ಸೈಕಲ್, ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ 1 ಮೋಟಾರ ಸೈಕಲ್, ಬೆಂಡಿಗೇರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ 1 ಮೋಟಾರ ಸೈಕಲ್ ಹಾಗೂ ವಿಜಯಪೂರ ಶಹರದಲ್ಲಿ ಕಳ್ಳತನವಾದ 2 ಮೋಟಾರ ಸೈಕಲ್‌ಗಳು ಹೀಗೆ ಒಟ್ಟು 7,80,000=00 ರೂ ಕಿಮ್ಮತ್ತಿನ 11 ಮೋಟಾರ ಸೈಕಲ್‌ಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ .
ಇನ್ನು ಈ ಒಂದು ಕಾರ್ಯಾಚರಣೆ ಯನ್ನು ಇನ್ಸಪೆಕ್ಟರ ಪ್ರವೀಣ ನೀಲಮ್ಮನವರ ನೇತೃತ್ವದಲ್ಲಿ ಪಿಎಸ್ ಐ ಡಿ.ವಾಯ್.ಮಾವಿನಂಡಿ. ಪಿ ಎಸ್ ಐ ಜಿ.ಸಿ.ರಜಪೂತ ಹಾಗು ಸಿಬ್ಬಂದಿಗಳಾದ ಆರ್.ಆರ್.ಹೊಂಕಣದವರ, ಸಿ.ಟಿ.ನಡುವಿನಮನಿ, ವಿ.ಎಸ್.ಗುಡಗೇರಿ, ಪ್ರಕಾಶ ತಗಡಿನಮನಿ, ಜಗದೀಶ ಮತ್ತಿಗಟ್ಟಿ, ಎಲ್.ವಾಯ್ ನಾಯಕ, ಎಂ.ಎಂ ಬೆನ್ನೂರ, ಶರಣಪ್ಪ ಕೋರಿ, ಸುರೇಶ ಕೋಲಿ ಹಾಗೂ ತಾಂತ್ರಿಕ ಸಿಬ್ಬಂದಿಯಾದ ಎಂ.ಎಸ್ ಚಿಕ್ಕಮಠ, ರವಿ ಗೋಮಪ್ಪನವರ, ರಾಘವೇಂದ್ರ ಭಡಂಕರ ಇವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂದಿಸುವಲ್ಲಿ ಯಶ್ವಸ್ವಿ ಆಗಿದ್ದಾರೆ. ಇನ್ನು ಪೊಲೀಸ್ ಸಿಬ್ಬಂದಿಗಳ
ಕಾರ್ಯವೈಖರಿಯನ್ನ ಪೊಲೀಸ್ ಆಯುಕ್ತರಾದ ರೇಣುಕಾ ಸುಮಾರನ್ ಶ್ಲಾಘಿಸಿರುತ್ತಾರೆ.