ಹುಬ್ಬಳ್ಳಿಯಲ್ಲಿ ಕಂಟ್ರಿ ಪಿಸ್ತೊಲ್ ವಶ ಇಬ್ಬರನ್ನು ಲಾಕ ಮಾಡಿದ ಮಾರುತಿ ಗುಳ್ಳಾರಿ ಹಾಗು ತಂಡ

ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ ಹತ್ತಿರ ಇಬ್ಬರು ಆರೋಪಿಗಳು ಸಂಶಯಾಸ್ಪದ ವಾಗಿ ತಿರುಗುತ್ತಿದ್ದಾಗ ಅಲ್ಲೆ ಇದ್ದ ಸಿಸಿಬಿ ಇನ್ಸಪೆಕ್ಟರ ಮಾರುತಿ ಗುಳ್ಳಾರಿ ಹಾಗು ಅವರ ತಂಡ ಇಬ್ಬರನ್ನು ಹಿಡಿದು ವಿಚಾರಿಸಿದಾಗ 8 ಗ್ರಾಂ ಗಾಂಜಾ ಹಾಗು ಪಿಸ್ತೊಲ್ ಸಮೆತವಾಗಿ ಸಿಕ್ಕಿಹಾಕೊಂಡಿದ್ದಾರೆ
ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸ ನಿಲ್ದಾಣದ ಹತ್ತಿರ ಬೆಳಗಾವಿ ಜಿಲ್ಲೆಯ ರೋಷನ್ ಜಮೀರ್ ಹಾಗೂ ಹಜರತ್ ಅಲಿ ಎಂಬಾತರು ಯಾವ ಕೆಲಸದ ಮೇಲೆ ಕಂಟ್ರಿ ಪಿಸ್ತೊಲ್ ಸಮೇತ ಗಾಂಜಾ ಸಿಕ್ಕಿದು ಅನುಮಾನ ಹುಟ್ಟು ಹಾಕಿದೆ .

ಇನ್ನು ಇಬ್ಬರನ್ನು ಬಂದಿಸಿ ವಿಚಾರಣೆ ಮಾಡಿದಾಗ ಬಂಧಿತರಿಂದ ಒಂದು ಕಂಟ್ರಿ ಪಿಸ್ತೂಲ್ (ಆರು ಜೀವಂತ ಗುಂಡುಗಳು) ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳ ಮೇಲೆ ಬೇರೆ ಬೇರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿವೆ ಎನ್ನಲಾಗಿದೆ. ಈ ಕುರಿತು ಗೋಕುಲ ರೋಡ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಎಸಿಪಿ ಎಸ್.ಪಿ ಒಡೆಯರ್, ಪಿಎಸ್ಐ ದೇವೆಂದ್ರಪ್ಪ, ಸಿಸಿಬಿ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ, ಎ.ಎಸ್ಐ ಲಂಗೋಟಿ, ಧಾರವಾಡ, ಭಜಂತ್ರಿ, ಹುಗ್ಗಿ, ಕುರಿ, ರಾಜೇಸಾಬ ಗುಂಜಾಳ, ಎಸ್.ಐ ಕಡೇಮನಿ ಸೇರಿದಂತೆ ಭಾಗಿಯಾಗಿದ್ದರು.