Uncategorized

ಯುವ ಮುಖಂಡ ಹಾಗು ಉದ್ಯಮಿಗೆ ಒಲಿದು ಬಂದ ಬಸವ ಸಮಿತಿಯ ಅಧ್ಯಕ್ಷ ಪಟ್ಟ

ಸಾಕಷ್ಟು ಐತಿಹಾಸಿಕ ಪರಂಪರೆಯ ಮಠಗಳಲ್ಲಿ ಒಂದಾಗಿರುವ ಮೂರು ಸಾವಿರ ಮಠದಲ್ಲಿ ನಡೆಯುವ ಬಸವ ಜಯಂತಿಯನ್ನು ಅರ್ಥಪೂರ್ಣ ಆಚರಣೆ ಮಾಡುವ ನಿಟ್ಟಿನಲ್ಲಿ ಬಸವ ಸಮಿತಿಯ ಅಧ್ಯಕ್ಷರನ್ನಾಗಿ ಉದ್ಯಮಿಗಳು ಹಾಗೂ ಯುವ ಮುಖಂಡರಾದ ಪ್ರವೀಣ ಕಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಇದೇ ಮೇ 10ರಂದು ನಡೆಯಲಿರುವ ಬಸವ ಜಯಂತಿ ಉತ್ಸವದ ಮೆರಗನ್ನು ಹೆಚ್ಚಿಸುವ ಸದುದ್ದೇಶದಿಂದ ಬಸವ ಸಮಿತಿಗೆ ಉತ್ಸಾಹಿ ಯುವ ಮುಖಂಡ ಪ್ರವೀಣ ಕಟ್ಟಿಯವರನ್ನು ಆಯ್ಕೆ ಮಾಡಲಾಗಿದೆ.

ಇನ್ನೂ ಬಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರವೀಣ ಕಟ್ಟಿಯವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಗಿದ್ದು, ಬಸವ ಮೂರ್ತಿಯನ್ನು ಪ್ರದಾನ ಮಾಡಲಾಯಿತು.ಇನ್ನು ಮುಂಬರುವ ದಿನಗಳಲ್ಲಿ ಬಸವ ಜಯಂತಿ ಜೊತೆಗೆ ಯುವಕರಲ್ಲಿ ಬಸವ ತತ್ವ ಸಂಘಟನೆ ಬಲಿಷ್ಠವಾದ ಬೆಳಸಲು ಶ್ರಮಿಸಬೇಕೆಂದು ಅಮರೇಶ ಹಿಪ್ಪರಗಿ ತಿಳಿಸಿದರು

ಇನ್ನು ಈ ಒಂದು ಸಂಧರ್ಬದಲ್ಲಿ ಅಧ್ಯಕ್ಷರಾದ ವೀರನ ಕಲ್ಲೂರ್ , ಚನ್ನಬಸಪ್ಪ ಧಾರವಾಡ ಶೆಟ್ಟರ, ಜಗದೀಶ ಕಾಳಣ್ಣವರ, ಅಮರೇಶ, ಹಿಪ್ಪರಗಿ, ನವೀನ್ ಕುದರಿ, ಈರಪ್ಪ ಎಮ್ಮಿ. ಎಂ.ಎ.ಶಿರಗಣ್ಣವರ. ಅಂದಾನಪ್ಪ ಹರದಾರಿ ಸಹೀತ ಅನೇಕ ಮುಖಂಡರು ಉಪಸ್ಥಿತ ರಿದ್ದರು.

Leave a Reply

Your email address will not be published. Required fields are marked *

error: Content is protected !!