ಖಾಕಿ ಮುಂದೆ ಅಮಾಯಕನಿಗೆ ಅವಾಜ್ ಹಾಕಿದ ರೌಢಿಶೀಟರ

ಹುಬ್ಬಳ್ಳಿಯಲ್ಲಿ ರೌಢಿಶೀಟರ್’ಗಳಿಗೆ ಪೊಲೀಸರನ್ನು ಕಂಡರೆ ಭಯವೇ ಇಲ್ಲವೇ ಎಂಬ ಅನುಮಾನ ಕಾಡತೊಡಗಿದೆ.
ಪೊಲೀಸರ ಮುಂದೆಯೇ ರೌಢಿಶೀಟರ್’ನೊಬ್ಬ ಬೈಕ ಮೇಲೆ ಹೋಗುತ್ತಿದ್ದ ಸವಾರನಿಗೆ ದಾರಿ ನೀಡದೆ ಅವಾಚ್ಚ ಶಬ್ದಗಳಿಂದ ಬೈದಿದ್ದರಿಂದ ಬೈಕ್ ಸವಾರ ಆತನನ್ನು ಹಿಡಿದು ಪೊಲೀಸರ ಬಳಿಗೆ ತಂದಾಗ, ಪೊಲೀಸರ ಮುಂದೆಯೇ ರೌಢಿಶೀಟರ್ ಅಮಾಯಕ ವ್ಯಕ್ತಿಗೆ ನಿಂದಿಸಿದಲ್ಲದೇ ಕೈ ಮಾಡಲು ಯತ್ನಿಸಿದ್ದಾನೆ.
ಈ ಘಟನೆ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆ ಹತ್ತಿರ ನಡೆದಿದ್ದು, ತೊರವಿ ಹಕ್ಕಲದ ಬಳಿಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಸವಾರನನ್ನು ವಿನಾಕಾರಣ ತಂಟೆ ತೆಗೆದು, ಥಳಿಸಿದ್ದಾನೆ.
ಈ ವೇಳೆ ಸ್ಥಳೀಯರು ರೌಢಿಶೀಟರ್’ನನ್ನು ಕಮರಿಪೇಟೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಕೂಡಾ ಪೊಲೀಸ್ ಮುಂದೆ ಅವಾಜ್ ಹಾಕಿದ್ದಾನೆ. ಈ ವಿಡಿಯೋ ನಿಮ್ಮ ಈ ಟಿವಿ ಕನ್ನಡಕ್ಕೆ ಸಿಕ್ಕಿದ್ದು, ಹುಬ್ಬಳ್ಳಿಯಲ್ಲಿ ರೌಢಿಶೀಟರ್’ಗಳಿಗೆ ಖಾಕಿ ಭಯವೇ ಇಲ್ಲ ಎಂಬ ಅನುಮಾನ ಕಾಡುವಂತಾಗಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಸದ್ಯ ಈಗಲಾದರೂ ಅಮಾಯಕರ ಮೇಲೆ ದರ್ಪ ಮೆರೆಯುವ ಪುಂಡ ಪೋಕರಿ ಹಾಗೂ ರೌಢಿಶೀಟರ್’ಗಳ ಮೇಲೆ ದಕ್ಷ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕ್ರಮ ಕೈಗೊಳ್ಳಬೇಕಿದೆ.