ಲಾರಿ ಪಲ್ಟಿ ಆಗಿ ಚಾಲಕನ ಎದೆ ಸೀಳಿದ ಕಬ್ಬಿಣದ ರಾಡ್ ಚಾಲಕ ಸ್ಥಿತಿ ಚಿಂತಾಜನಕ

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಆಗಿದ್ದು. ಡಿವೈಡರಗೆ ಹಾಕಿದ್ದ ಕಬ್ಬಿಣದ ಪೈಪ ಚಾಲಕನ ಬೆನ್ನಿನ ಹಿಂಬಾಗದಿಂದ ಎದೆಯ ಸೀಳಿದ್ದು ಚಾಲಕನ ಸ್ಥಿತಿ ಚಿಂತಾಜನಕವಾಗಿದೆ. ಎದೆಗೆ ಕಬ್ಬಿಣದ ರಾಡ ಹೊಕ್ಕಿದ್ದರು ಕೂಡಾ ಚಾಲಕ ದಿಕ್ಕು ತೋಚದೆ ಕುಳತ್ತಿರುವುದನ್ನು ಕಂಡು ಸಾರ್ವಜನಿಕರು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಿಂದ ದಾವಣಗೆ ಕಡೆ ಹೊರಟಿದ್ದ ಲಾರಿ ರಾಣೇಬೆನ್ನೂರ ತಾಲೂಕಿನ ಹೂಲಿಹಳ್ಳಿ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ನಡೆದಿದೆ. ಶಿರಸಿ ಮೂಲದ ಚಾಲಕ ಶಿವಾನಂದ ಬಡಗಿ ಲಾರಿ ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು ಇನ್ನು ಸ್ಥಳಕ್ಕೆ ಆಗಮಿಸಿದ ಅಂಬ್ಯುಲೆನ್ಸ ಹಾಗು ಅಗ್ನಿಶಾಮಕ ದಳದ ಸಿಬ್ಬಂದಿಗಳು ಪೈಪ ಹೊರ ತಗಿಯಲು ಆಗದೆ ಪೈಪನ್ನು ಕತ್ತರಿಸಿ ಆಂಬ್ಯೂಲೆನ್ಸ ನಲ್ಲಿ ಚಿಕ್ಕಿತ್ಸೆಗಾಗಿ ಹುಬ್ಬಳ್ಳಿಯ ಕಿಂಸ ಆಸ್ಪತ್ರೆಗೆ ರವಾನಿಸಲಾಗಿದ್ದು ಇನ್ನು ಸ್ಥಳಕ್ಕೆ ಆಗಮಿಸಿದ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ