ಇನ್ಸ್ಪೆಕ್ಟರ್ ಶ್ರೀ ಶೈಲ ಕೌಜಲಗಿ ಆಂಡ್ ಟೀಮ್ ಕಾರ್ಯಾಚರಣೆ ನಾಲ್ವರು ಮೆಟಲ್ ಬ್ಯಾರಿಯರ್ಸ ಕಳ್ಳರ ಬಂಧನ್

ಕಲಘಟಗಿ ರಸ್ತೆಯ ಪಕ್ಷದಲ್ಲಿ ವಾಹನ ಸವಾರರ ಸುರಕ್ಷತೆಗಾಗಿ ಅಳವಡಿಸಿರುವ ಮೆಟಲ್ ಕ್ರಾಸ್ ಬ್ಯಾರಿಯರ್ಸ್’ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿತರನ್ನು ಹಳಿಯಾಳ ತಾಲೂಕಿನ ಕವಲವಾಡ ಗ್ರಾಮದ ಮೊಹಮ್ಮದ್ ಕಾರವಾರ (22), ಬಾಬಾಜಾನ್ ಕಾರವಾರ (52), ಹಳಿಯಾಳ ಪಟ್ಟಣದ ಮುಲ್ಲಾ ಓಣಿಯ ರಿಜ್ವಾನ್ ಸೈಯದ್ (20), ಮುಂಬೈ ಮೂಲದ ಮೋಬಿನ್ ಶೇಖ್(35) ಎಂದು ಗುರುತಿಸಲಾಗಿದೆ.

ಆರೋಪಿಗಳು ಕಳೆದ ನವೆಂಬರ್ 23 ರಂದು ಬೆಲವಂತರ ಕೆರೆಯ ಹತ್ತಿರ ರಸ್ತೆಯ ಬದಿಯಲ್ಲಿ ಹಾಕಿರುವ 3.60 ಲಕ್ಷ ರೂ ವೆಚ್ಚದ 45 ಮೆಟಲ್ ಕ್ರಾಸ್ ಬ್ಯಾರಿಯರ್ಸ್ ಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 8.85 ಲಕ್ಷ ಮೌಲ್ಯದ 45 ಮೆಟಲ್ ಕ್ರಾಸ್ ಬ್ಯಾರಿಯರ್ಸ್, ಟಾಟಾ ಏಸ್ ಗೂಡ್ಸ್ ವಾಹನ, ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಒಂದು ಕಾರ್ಯಾಚರಣೆಯನ್ನು ಇನ್ಸ್ಪೆಕ್ಟರ್ ಶ್ರೀ ಶೈಲ ಕೌಜಲಗಿ ನೇತೃತ್ವದಲ್ಲಿ ಪಿ ಎಸ್ ಐ ಸಿ ಎನ್ ಕರವಿರಪ್ಪನವರ. ಸಿಬ್ಬಂದಿಗಳಾದ ಮಹಾಂತೇಶ ನಾನಾಗೌಡರ. ಗೋಪಾಲ ಪಿರಗಿ. ಎಮ್ ಎಸ್ ಎಲಿಗಾರ. ಸಂಜು ಜಾಲಗಾರ. ವಾಯ್ ಎಚ್ ಹಂಚಿನಮನಿ. ವಿಜಯ ಉಪ್ಪಿನ. ಅಭಿನಂದನ ಮಾದಪ್ಪನವರ.ಹಾಗು ಪ್ರಕಾಶ ಧಳಪ್ಪಗೌಡ್ರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಇನ್ನು ಇವರ ಕಾರ್ಯಾಚರಣೆಗೆ ಎಸ್ ಪಿ ಗೋಪಾಲ ಬ್ಯಾಕೋಡ ಅವರು ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ