ಗ್ರಾಹಕರಿಗೆ ಬಿಳುತ್ತೆ ಬಿಸಿ ಬಿಸಿ ಕಜ್ಜಾಯ ಇದು ಹೆಸರಿಗೆ ಅಷ್ಟೇ ಫಾಸ್ಟ್ ಪುಡ್ ಅಂಗಡಿ….

ಇದು ಹೇಳಿಕೇಳಿ ಬಿಸಿ ಬಿಸಿ ಫಾಸ್ಟ್ ಪುಡ್, ಇಲ್ಲಿ ಏನಾದರೂ ಬಿಸಿ ಬಿಸಿ ಕೇಳಿದ್ರೆ ಅಲ್ಲಿನ ಮಾಲೀಕರು ಕೊಡತ್ತಾರೆ ಬಿಸಿ ಬಿಸಿ ಕಜ್ಜಾಯ್….
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಲ್ಲಿರುವ ಬಿಸಿ ಬಿಸಿ ಫಾಸ್ಟ್ ಫುಡ್ ಗ್ರಾಹಕರಿಗೆ ಫಾಸ್ಟ್ ಫುಡ್ ತಯಾರಿಸಿ ಕೊಡುತ್ತಿದೆ. ಆದರೆ ಇಲ್ಲಿನ ಮಾಲೀಕರು ಹಾಗೂ ಸಿಬ್ಬಂದಿಗಳು ಮಾತ್ರ ಅಲ್ಲಿಗೆ ಪ್ರತಿದಿನ ಬಂದಂತಹ ಗ್ರಾಹಕರೊಂದಿಗೆ ಅಸಭ್ಯ ವರ್ತನೆ ತೋರುವ ಜೊತೆಗೆ ಗುಂಡಾ ವರ್ತನೆ ಮಾಡುತ್ತಿದ್ದಾರಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ
ಅಂದಹಾಗೇ ಮೊನ್ನೆ ಈ ಬಿಸಿಬಿಸಿ ಫಾಸ್ಟ್ ಪುಡ್ ನಲ್ಲಿ ಗ್ರಾಹಕನೊಬ್ಬ ತನ್ಮ ಹಸಿವು ನಿಗಿಸಿಕೊಳ್ಳಲು ಹೋಗಿದ್ದಾನೆ. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಬಿಸಿ ಬಿಸಿ ಫಾಸ್ಟ್ ಪುಡ್ ಸಿಬ್ಬಂದಿ ಮನಬಂದಂತೆ ಗ್ರಾಹಕನಿಗೆ ಥಳಿಸಿದ್ದ ಕುರಿತು ಇಗಾ ವಿಡಿಯೋ ವೈರಲ್ ಆಗಿದೆ.
ಸದ್ಯ ಬಿಸಿ ಬಿಸಿ ಫಾಸ್ಟ್ ಫುಡ್ ಮಾಲೀಕರ ವಿರುದ್ಧ ಗ್ರಾಹಕರ ಅಸಮಾಧಾನ ಹೆಚ್ಚಾಗಿದ್ದು, ಗುಂಡು ವರ್ತನೆ ತೋರಿರುವ ಅಂಗಡಿ ಮಾಲೀಕರ ವಿರುದ್ಧ ಉಪನಗರ ಠಾಣೆಯ ಪೊಲೀಸರು ಬುದ್ದಿ ಕಲಿಸತ್ತಾರಾ ಕಾದು ನೋಡಬೇಕಿದೆ.