ಮಧ್ಯ ಪ್ರೀಯರೇ ನಕಲಿ ಸರಾಯಿ ಇದೆ ಎಚ್ಚರ ಎಚ್ಚರ!! ಹುಬ್ಬಳ್ಳ್ಯಾಗ ಅಬಕಾರಿ ಇಲಾಖೆಯವ್ರು ಒಳ್ಳೇ ಕೆಲಸ ಮಾಡ್ಯಾರ ನೋಡ್ರಿ……

ಹುಬ್ಬಳ್ಳಿಯಲ್ಲಿ ದೂಡ್ದ ಪ್ರಮಾಣದಲ್ಲಿ ನಕಲಿ ಮಧ್ಯ ತಯಾರಿಕೆ ಜಾಲ ಪತ್ತೆ ಆಗಿದೆ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ನಕಲಿ ಬ್ರಾಂಡೆಡ್ ಮಧ್ಯೆಗಳನ್ನು ವಶಪಡಿಸಿಕೊಂಡಿದ್ದಾರೆ
ಇನ್ನು ಹುಬ್ಬಳ್ಳಿಯ ಛಬ್ಬಿ ಗ್ರಾಮದ ಬಳಿಯ ತೋಟದ ಮನೆಯಲ್ಲಿ ಖದೀಮರು ನಕಲಿ ಮಧ್ಯ ತಯಾರು ಮಾಡುತ್ತಿದ್ದು ಕಂಡು ಬಂದಿದ್ದೆ
ಇನ್ನು ಗ್ರಾಮೀಣ ಪೊಲೀಸ ಹೊರ ಠಾಣೆಯ ಕೂಗಳತೆಯ ದೂರದಲ್ಲಿಯೇ ಸ್ವಲ್ಪವು ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಒಂಟಿ ಮನೆಯಲ್ಲಿ ಈ ಒಂದು ಅಕ್ರಮ ಮಧ್ಯ ತಯಾರಿ ಮಾಡುತ್ತಿದ್ದರು .
ಇನ್ನು ದಾಳಿಯಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ಮದ್ಯ ಸಮೇತ ಹುಬ್ಬಳ್ಳಿ ಮೂಲದ ಅಮೃತ್ ಹಾಗೂ ಸಂದೀಪ್ ಇಬ್ಬರನ್ನೂ ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮತ್ತು ಇನ್ನೊಬ್ಬ ಕಿಂಗ್ ಪಿನ್ ವಿನಾಯಕ ಜೀತುರಿಯನ್ನು ಸಹ ಹುಬ್ಬಳ್ಳಿಯಲ್ಲಿ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.