Uncategorized

ಪಹಲ್ಗಾಮ್‌ನ ಉಗ್ರರ ದಾಳಿಯಲ್ಲಿ ಮೃತರಾದವರಿಗೆ ಶ್ರೀಗಂಧ ಶೇಟ್ ನೇತೃತ್ವದಲ್ಲಿ ಸಂತಾಪ ಭಾವಪೂರ್ಣ ಶ್ರದ್ಧಾಂಜಲಿ

ಜಮ್ಮುವಿನ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯವನ್ನು ದೇಶದ ಮೂಲೆ ಮೂಲೆ ಮೂಲೆಗಳಿಂದ ಖಂಡನೆ ವ್ಯಕ್ತವಾಗುತ್ತಿದ್ದು ಪ್ರತಿಯೊಬ್ಬರು ಕೂಡಾ ಇದನ್ನು ಖಂಡಿಸುತ್ತಿದ್ದು ಇನ್ನೂ ಈ ಒಂದು ಘಟನೆ ಯನ್ನು ಹುಬ್ಬಳ್ಳಿಯ ಕೆಜಿಪಿ ಗ್ರೂಪ್ ಕೂಡಾ ಖಂಡಿಸಿದ್ದು ಘಟನೆಗೆ ಗ್ರೂಪ್ ನ ಅಧ್ಯಕ್ಷ ಗಣೇಶ್ ಶೇಟ್ ಮತ್ತು ಶ್ರೀಗಂಧ ಶೇಟ್ ತೀವ್ರ ಬೇಸರವನ್ನು ವ್ಯಕ್ತಪಡಿಸಿ ಅವರು ಖಂಡಿಸಿದ್ದಾರೆ.ಇದರೊಂದಿಗೆ
ಇನ್ನೂ ಈ ಒಂದು ವಿದ್ವಾಂಸಕ ಕೃತ್ಯಕ್ಕೆ ಕೆಜಿಪಿ ಗ್ರೂಪ್ ನಿಂದ ನಗರದಲ್ಲಿ ಸಂತಾಪ ಸೂಚಕ ಸಭೆಯನ್ನು ಮಾಡಲಾಯಿತು ನಗರದ ಸಂಗೊಳ್ಳಿ ರಾಯಣ್ಣ ವ್ರತ್ತದಲ್ಲಿ ಕೆಜಿಪಿ ಗ್ರೂಪ್ ಮತ್ತು ಫೌಂಡೇಶನ್ ವತಿಯಿಂದ ಅಧ್ಯಕ್ಷರಾಗಿರುವ ಶ್ರೀಗಂಧ ಶೇಟ್ ನೇತೃತ್ವದಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.

ನಂತರ ಘಟನೆ ಯಲ್ಲಿ ಮೃತರಾದವರಿಗೆ ಶ್ರೀಗಂಧ ಶೇಟ್ ಅವರ ನೇತೃತ್ವದಲ್ಲಿ ಸಂತಾಪ ಸೂಚಿಸಿ ಉಗ್ರರ ದಾಳಿಯಲ್ಲಿ ಪ್ರಾಣತ್ಯತ್ತವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಕ್ಯಾಂಡಲ್ ಮಾರ್ಚ್ ನೊಂದಿಗೆ ಅಗಲಿದವರಿಗೆ ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ಸೂಚಿಸಲಾಯಿತು‌.ಇದೇ ವೇಳೆ ಕೆಜಿಪಿ ಗ್ರೂಪ್ ಆಫ್ ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ಮಾತನಾಡಿ ಘಟನೆ ಯನ್ನು ಖಂಡಿಸಿ ಬೇಸರವನ್ನು ವ್ಯಕ್ತಪಡಿಸಿದರು ಕೂಡಲೇ ಉಗ್ರರ ರನ್ನು ಸೆರೆಹಿಡಿದು ಹುತಾತ್ಮರಾದವರಿಗೆ ಶಾಂತಿ ಸಿಗುವಂತೆ ಕೇಂದ್ರ ಸರ್ಕಾರವು ಮಾಡಬೇಕು ಎಂದು ಒತ್ತಾಯಿಸಿದರು.ಶ್ರೀಗಂಧ ಶೇಟ್ ಅವರೊಂದಿಗೆ ಕೆಜಿಪಿ ಗ್ರೂಪ್ ಸಿಬ್ಬಂದಿ ಗಳು ಕ್ಯಾಂಡಲ್ ಹಿಡಿದು ಮೌನ ಮೆರವಣಿಗೆ ಮಾಡಿದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರಾಣತೆತ್ತ ನಾಗರಿಕರಿಗೆ ಮೌನಾಚರಣೆ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. ಈ ಒಂದು ಸಂದರ್ಭದಲ್ಲಿ ಶ್ರೀಗಂಧ ಶೇಟ್ ಅವರೊಂದಿಗೆ ಅನುಪ,ರವಿ ಅರಸಿದ್ದಿ,ನಾಗರಾಜ ಸೋಗಿ,ರಾಜು ಪೂಜಾರ,ಉಮೇಶ ಆತ್ಮಕೂರ ಸೇರಿದಂತೆ ಕೆಜಿಪಿ ಗ್ರೂಪ್ ಸರ್ವ ಸಿಬ್ಬಂದಿ ಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!