ಹೆಸರಿಗೆ ಸ್ಪಾ….ಒಳಗೊಳಗೆ ಚಮ್ಮಕ್ ಚಲ್ಲೋ….!!
ಏನಿದರ ಮರ್ಮ…!

ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಸ್ಪಾಗಳು ದಿನದಿಂದ ದಿನಕ್ಕೆ ತಲೆ ಎತ್ತುತ್ತಿವೆ..ವಾಣಿಜ್ಯ ನಗರಿಯ ಜನನೀಬಿಡ ಸ್ಥಳಗಳಲ್ಲಿಯೇ ಸ್ಪಾ ತಲೆ ಎತ್ತುತ್ತಿವೆ…ಹೆಸರಿಗೆ ಸ್ಪಾ ಆದ್ರೆ ಒಳಗಡೆ ಅದೇನೋ ಬೇರೆ ನಡೆಯತ್ತೆ ಅನ್ನೋ ಗುಮಾನಿ ಇದೆ… ಕೆಲವು ತಿಂಗಳುಗಳ ಹಿಂದೆ ಅವಳಿ ನಗರದ ಎಲ್ಲಾ ಸ್ಪಾಗಳು ಬಂದ್ ಆಗಿದ್ವು,ಆದ್ರೆ ಇದೀಗ ಏಕಾಏಕಿ ಎಲ್ಲಾ ಸ್ಪಾಗಳು ಸ್ಟಾರ್ಟ್ ಆಗಿವೆ..ಬಾಡಿ ಮಸಾಜ್ ಹೆಸರಲ್ಲಿ,ಅನೈತಿಕ ಚಟುವಟಿಕೆ ನಡೀತಿರೋ ಅನುಮಾನ ಇದೆ…ಕೆಲ ಕಡೆ ಅನಧಿಕೃತ ಸ್ಪಾ ತಲೆ ಎತ್ತಿವೆ…ಇದಕ್ಕೆಲ್ಲ ಯಾರೂ ಅನುಮತಿ ನೀಡಿದ್ರೂ ಅನ್ನೊದೆ ಯಕ್ಷಪ್ರಶ್ನೆಯಾಗಿದೆ..ಅದರಲ್ಲೂ ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ ನಾಯಿ ಕೊಡೆಯಂತೆ ಹೊಸ ಹೊಸ ಸ್ಪಾಗಳು ಪ್ರಾರಂಭವಾಗುತ್ತಿದ್ದು ಅದಕ್ಕೆ ಅನುಮತಿಯನ್ನು ಯಾರು ನೀಡುತ್ತಿದ್ದಾರೆ ಒಳಗಡೆಯಲ್ಲಿ ಏನು ನಡೆಯುತ್ತಿದೆ ಎಂದು ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಲು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.ಇಂತಹ ಅನಧಿಕೃತ ಸ್ಪಾ ಗೆ ಕಡಿವಾಣ ಹಾಕಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯ..ನಾಯಿಕೊಡೆಯಂತೆ ಹಬ್ಬಿರೋ ಸ್ಪಾಗೆ ಪಾಲಿಕೆ,ಪೊಲೀಸ್ ಇಲಾಖೆ ಬ್ರೇಕ್ ಹಾಕಬೇಕಿದೆ..