ಟ್ರಾಫಿಕ್ ಪೊಲೀಸರಿಂದ ತಪ್ಪಿತು ದೊಡ್ಡ ಅನಾಹುತ ಪೂರ್ವ ಸಂಚಾರಿ ಪೊಲೀಸರಿಗೆ ಸಾರ್ವಜನಿಕರಿಂದ ಮೆಚ್ಚುಗೆ

ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಚಾಲಕರಿಬ್ಬರು ನಡುರಸ್ತೆಯಲ್ಲಿ ಮಾರಾಮಾರಿ ಮಾಡಿರುವ ಘಟನೆ ಇಲ್ಲಿನ ಎಸ್.ಟಿ.ಬಂಡಾರಿ ಅಂಗಡಿ ಬಳಿಯಲ್ಲಿ ನಡೆದಿದೆ.
ಮೊದಲೇ ಹುಬ್ಬಳ್ಳಿಯ ರಸ್ತೆಗಳು ಹದಗೆಟ್ಟು ಹೋಗಿದ್ದು, ಈ ವೇಳೆ ಜನಜಂಗುಳಿಯಿಂದ ತುಂಬಿರುವ ದಾಜಿಬಾನ್ ಪೇಟೆ ರಸ್ತೆಯಲ್ಲಿ ಕಾರಿಗೆ ಕಾರು ಚಾಲಕ ತಾಗಿಸಿದ್ದಾನೆ.
ಇದೇ ಕಾರಣಕ್ಕೆ ಚಾಲರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಇನ್ನೇನು ಕಾರ್ ನಲ್ಲಿದ್ದ ರಾಡನ್ನು ತೆಗೆದು ಹೊಡೆಯಲಿಕ್ಕೆ ಹೋದ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ
ಈ ವೇಳೆ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು, ಬಳಿಕ ಸಂಚಾರಿ ಪೊಲೀಸರು ಕಾರುಗಳನ್ನು ವಶಕ್ಕೆ ಪಡೆದು ಸಂಚಾರವನ್ನು ಮುಕ್ತಗೊಳಿಸಿದರು.